ಬಿಗ್ ಬಾಸ್ ಕನ್ನಡ ಸೀಸನ್ 5 : ಜನಸಾಮಾನ್ಯರ ಮೇಲೆ ಸೆಲೆಬ್ರಿಟಿಗಳ ದಬ್ಬಾಳಿಕೆ | Filmibeat Kannada

2017-10-26 46

ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಒಂದು ವಾರ ಕಳೆದಿದೆ ಅಷ್ಟೆ. ಅಷ್ಟು ಬೇಗ 'ಬಿಗ್ ಬಾಸ್' ಮನೆ ಇಬ್ಭಾಗ ಆಗಿದೆ. ಸೆಲೆಬ್ರಿಟಿಗಳೆಲ್ಲ ಒಂದು ಗುಂಪುಗಾಗಿದ್ದರೆ, ಜನಸಾಮಾನ್ಯರದ್ದೇ ಮತ್ತೊಂದು ಗುಂಪು. ಒಡೆದ ಮನೆಯಂತಾಗಿರುವ 'ದೊಡ್ಮನೆ'ಯಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್ ಕಂಡ್ರೆ ಕೆಲ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಕಿರಿಕಿರಿ. ಇದೇ ಕಾರಣಕ್ಕೆ ಆಗಾಗ ದಿವಾಕರ್ ಹಾಗೂ ಸೆಲೆಬ್ರಿಟಿ ಸ್ಪರ್ಧಿಗಳ (ತೇಜಸ್ವಿನಿ, ಸಿಹಿ ಕಹಿ ಚಂದ್ರು, ದಯಾಳ್ ಪದ್ಮನಾಭನ್) ನಡುವೆ ವಾದ-ವಾಗ್ವಾದ-ವಾಕ್ಸಮರ ನಡೆಯುತ್ತಿದೆ.ಕಾಲು ಕೆರೆದುಕೊಂಡು ಜನಸಾಮಾನ್ಯರ ಜೊತೆ ಜಗಳಕ್ಕೆ ಇಳಿಯುತ್ತಿರುವ ಸೆಲೆಬ್ರಿಟಿಗಳ ವಿರುದ್ಧ 'ಬಿಗ್ ಬಾಸ್' ವೀಕ್ಷಕರು ಕೋಪಿಸಿಕೊಂಡಿದ್ದಾರೆ. 'ಕಾಮನ್ ಮ್ಯಾನ್' ಮೇಲೆ ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ಫೇಸ್ ಬುಕ್ ನಲ್ಲಿ ವೀಕ್ಷಕರು ತಮ್ಮ ಅಸಮಾಧಾನವನ್ನು ಹೊರಹಾಕಿರುವುದು ಹೀಗೆ....ಎಲ್ಲರೂ ಜನಸಾಮಾನ್ಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.

Bigg Boss Kannada 5: Week 2: Viewers are annoyed with celebrity contestants. Viewers says, Celebrities are dominating Common People. Celebrity Contestants are acting too much, Nobody is respecting common people which is very bad says Big Boss viewers.